ಕಹಳೆ ಕಾರ್ಯಾಗಾರ 2.0 | ಗೀತೆ ರಚನೆ ಕಾರ್ಯಾಗಾರ

ಕಹಳೆ ಕಾರ್ಯಾಗಾರ 2.0 | ಗೀತೆ ರಚನೆ ಕಾರ್ಯಾಗಾರ ಉಪನ್ಯಾಸಕರು : ಕಿರಣ್ ಕಾವೇರಪ್ಪ ನೋಂದಾಯಿಸಿಕೊಳ್ಳಲು ಕೆಳಗಿನ ಕೊಂಡಿ ಕ್ಲಿಕ್ ಮಾಡಿ https://docs.google.com/…/1sxIIO7nJ7Vg2hl_xHJtTNH1vjFb…/edit

ಕಹಳೆ ಕವನ| ಚಿಣ್ಣರ ಚಕ್ಕುಲಿ | ರಜೆ ಬಂತು ಸರಿ|ಮಂಜು

ಪರೀಕ್ಷೆ ಮುಗಿತು ಸರಿ| ರಜೆ ಬಂತು ಸರಿ| ಊರೂರಿಗೆ ಹೋಗಬೇಕು ಸರಾಸರಿ||   ಇನ್ನು ಫೋನು ಹಚ್ಚಿ, ಕರೆ| ನಾ ಬರುತಿದ್ದೇನೆ ಖರೆ | ಊರೂರ ಬೀದೀಲಿ ಬಿಡಿಸುತ್ತೇನೆ ಗರಿಯಲ್ಲಿ ಗೆರೆ ||   ಅಜ್ಜಿ ಮಾಡುವ ಹೋಳಿಗೆಯಲ್ಲಿರುತ್ತೆ ಮಜ | ಅಜ್ಜನೊಟ್ಟಿಗೆ ಮಾಡುತ್ತೇನೆ ಹೊಲವನ್ನು ಸಜ ||   ಕೆರೇಲಿ ಈಜುತ್ತೇನೆ ಥರ ಥರ| ಅದಕ್ಕೆ ಒಂದೆರಡು ಏಟಂತೂ ಬಿದ್ದಾವು ಪಟಪಟ || ನನ್ನ ಹುಚ್ಚಾಟ ಇಲ್ಲಿದೆ ತರಾವರಿ| ಊರೂರಿಗೆ ನಾ ಇದ್ದಕ್ಕೆ ಬಂದೆ ಸರಾಸರಿ|| … More ಕಹಳೆ ಕವನ| ಚಿಣ್ಣರ ಚಕ್ಕುಲಿ | ರಜೆ ಬಂತು ಸರಿ|ಮಂಜು

ಕಹಳೆ ಅಂಕಣ |ಹಸಿವೆಂಬ ನಕ್ಷತ್ರಿಕ ಬೆನ್ನತಿದಾಗ ?|ಪ್ರಶಾಂತ್ ರಾಮಸ್ವಾಮಿ

ಹಸಿವೆಂಬ ನಕ್ಷತ್ರಿಕ ಬೆನ್ನತಿದಾಗ ? ಯಾವ್ದೊ ಕೆಲಸದ ಮೇಲೆ ಹುಬ್ಬಳ್ಳಿ ಹೋಗಿದ್ದೆ, ಕೆಲಸ ಮುಗ್ಸಿ ಮಾರನೇ ದಿನ ಊರಿಗೆ ಹೊರಡೋಕೆ ಸಂಜೆ ರೈಲ್ವೆ ಸ್ಟೇಶನ್ಗೆ ಸ್ವಲ್ಪ ಬೇಗ ಬಂದಿದ್ದೆಇನ್ನೂ ಅರ್ಧ ಮುಕ್ಕಾಲ್ಗಂಟೆ ಇತ್ತು ಟ್ರೈನ್ ಬರಕೆ ಹಾಗೇ ಟೈಮ್ ಪಾಸ್ ಹಾಗ್ಬೇಕಲ್ವ ಹೋಗಿ waiting hall ಅಲ್ಲಿ wifi ಆನ್ ಮಾಡ್ಕೊಂಡುಕುತ್ಕೊಂಡೆ ,ಹೌದು ಹೇಳಿಲ್ಲಾ ನಿಮ್ಗೆ ;ನಿಜಾ ಹುಬ್ಬಳ್ಳಿ station ಸೂಪರ್ ಇದೆ ರೀ,  cleanness, security,standard,maintenance ವಾಹಃಅನ್ಸತ್ತೆ ; ಬಿಡಿ ಅದು ಹಾಗಿರಲಿ. ಏನೋ ಹೇಳ್ತಿದ್ದೆ yes WiFi connect ಮಾಡ್ಕೊಂಡು songs ಡೌನ್ಲೊಡ್ ಮಾಡ್ತಾ ಕೂತಿದ್ದೆ waiting hall ಪೂರ್ತಿಗ್ಲಾಸ್ ಕವರ್ ಆಗಿದ್ದು ಅಂದ್ರೆ ಹೊರಗಡೆಗೆ ಕಾಣ್ತಿತ್ತು ಹೋಗ್ ಬರೋ ಟ್ರೈನೂ,ಜನ ಓಡಾಡ್ತಿರದು ಎಲ್ಲಾ ಕಾಣ್ತಿತ್ತು ನೋಡ್ತಾ ಹಾಗೆ ಕೂತಿದ್ದೆ. ಅಲ್ಲೇ platform ಹತ್ರಾ ಮೂರು ಜನ ಯಾರೋ family ಕೂತಿದ್ರು ಯಾವ್ದೊ ಟ್ರೈನ್ಗೆ ಕಾಯ್ಕೊಂಡು ಸುಮ್ನೆ ಅವರನ್ನ ನೋಡ್ತಿದ್ದೆ ,ಊಟದಪ್ಯಾಕೆಟ್ಗಳನ್ನ ಹೊತ್ತಿದೋನೊಬ್ಬ ಹಿಂದೀಲಿ ಖಾನ ಖಾನ ಅನ್ಕೊಂಡು ಬರ್ತಿದ್ದ ಅವನ್ನ ಕರೆದು ಅವರು ಊಟ ತಗೋತಿದ್ರು , ಅಲ್ಲೆ ಪಕ್ಕದಲ್ಲಿಕುಡಿಯುವ ನೀರು ಅಂತ ಬೋರ್ಡ್ ಹಾಕಿತ್ತು ಅಲ್ಲೊಬ್ಬ ಹಳೇ ಬಟ್ಟೆ ಹಾಕ್ಕೊಂಡಿದ್ದ ಮುದ್ಕಪ್ಪ ಕೂತಿದ್ದ ಫುಲ್ ಸುಸ್ತಾಗಿದ್ದ ಅನ್ಸತ್ತೆ ಊಟ ಮಾಡ್ದೆಅದ್ಯಾವ್ದೊ ಜ್ಯೂಸ್ಬಾಟಲ್ಗೆ ಅಲ್ಲೆ ಇದ್ದ ನಲ್ಲಿಯಿಂದ ನೀರ್ ಇಡ್ಕೊಂಡು ಪೈಪ್ ಹಾಕಿ ಎಳಿತಿದ್ದಾ ನೀರನ್ನ ಅಲ್ಲೇ ಕುತ್ಕಂಡು. ಹೇಳಿದ್ನಲ್ವ ಅವ್ರ್ಯರೋಊಟ ತಗೊಂಡ್ರು ಅಂತಾ ಅದ್ರಲ್ಲಿ ಒಬ್ಬ ನೀರೇನೊ ಇಡ್ಕೊಳಕೆ ಹೋಗಿ ಬಾಟಲ್ಗೆ ,ಅವನ್ನ ಗದರ್ತಿದ್ದ ಹೋಗ್ ಆಕಡೆ ಅಂತಾ.ಅವನು ಅಲ್ಲೆ ಪಕ್ಕಕ್ಕೆಹೋಗಿ ಕುತ್ಕೊಂಡು ಅವರನ್ನೆ ನೋಡ್ತಿದ್ದ. ಅವರೆಲ್ಲ ಊಟಮಾಡಕೆ ಶುರು ಮಾಡಿ , ಮುಗಿಸಿದ್ದು ಆಯ್ತು ಅನ್ನಿ ಅದ್ರಲ್ಲಿ ಯಾರಿಗೋ ಊಟ ಜಾಸ್ತಿ ಆಗಿ ಅರ್ಧ ತಿಂದು ಬಿಟ್ಟಿದ್ದನ್ನ ಅಲ್ಲಿದ್ದಮುದ್ಕಪ್ಪನಿಗೆ ಕೊಡೋಕ್ ಹೋಗ್ತಿದ್ದ.ಹಸಿವಿನಿಂದ ಬಳಲಿದಂತಿದ್ದ ಆ ಮುದಿ ಜೀವ ಅವರನ್ನೆ ನೋಡ್ತಿದ್ದ .ಅದನ್ನ ತಿನ್ನಕೆ ರೆಡಿ ಆಗ್ತಿದ್ದ ! ನಿಜ ಹೇಳ್ತಿನಿಯಾಕೆ ಅಂತ ಗೊತ್ತಿಲ್ಲ sudden ಆಗಿ ಹೋಗಿ ಆ ಊಟದ ಪ್ಯಾಕೆಟ್ನ ತೆಗೆದು Dustbin ಗೆ ಹಾಕ್ದೆ , ಆ ಊಟ ಕೊಟ್ಟೊನೂ , ಆ ಮುದ್ಕ ಎಲ್ರು ನನ್ನೇನೋಡ್ತಿದ್ರು.ಆ ತಾತಂಗೆ ಕೋಪ ಬಂದಿತ್ತು ಅನ್ಸತ್ತೆ ಹಸಿದಿದ್ದವನ ಊಟ ಕಿತ್ತು ಬಿಸಾಕಿದ್ದಕ್ಕೆ. ಅದನ್ನ dustbin ಗೆ ಹಾಕಿ ಅಲ್ಲೆ ಇದ್ದ ಕ್ಯಾಂಟೀನ್ ಇಂದ ಬೇರೆ ಊಟದ ಪ್ಯಾಕೆಟ್ ಕೊಡ್ಸಿ ಅಲ್ಲಿಂದ ನಾನು ಸುಮ್ಮನೇ ನಾನ್ ಹೊರಡಬೇಕಿದ್ದplatform ಗೆ ಬಂದೆ ಟೈಮ್ ಆಗಿತ್ತು ಟ್ರೈನ್ ಕೂಡ ಬಂದಿತ್ತು ,ಸುಮ್ನೆಹತ್ತಿ ಬಂದು ಊರ್ ಸೇರ್ಕೊಂಡೆ. ಮನೆಗೆ ಬಂದ್ಮೇಲೆ ಅದನ್ನೇ ಯೋಚನೆ ಮಾಡ್ತಾ ಕೂತಿದ್ದೆ ,ಯಾಕ್ ಹಾಗ್ ಮಾಡ್ದೆ ಅಂತಾ? ಹೌದಲ್ವ ! ಜನ ಯಾರಾದ್ರು ಹಸಿವಲ್ಲಿದ್ದಾಗ , ಅವ್ರುತಿಂದು ಮಿಕ್ಕಿದ್ದನ್ನ ಕೊಡ್ತಾರೆ, ಜೀರ್ಣವಾಗದಷ್ಟು ತಿಂದು ಉಳಿದಿದ್ದನ್ನ ಕೊಡೋಕೋಗ್ತಾರೆ. ನಿಮ್ಗೆ ಕೊಡೋ ಮನಸಿದೆ ಅದು ಖುಷಿನೇ ಆದ್ರೆ ನಿಮ್ಗೆಸಾಕು ಅನ್ಸಿದ್ದನ್ನ ಕೊಡೋದಲ್ಲ ನೀವು ಹೊಟ್ಟೆತುಂಬ ತಿಂದು ಅವರಿಗೆ ಬಾಳೆಹಣ್ಣೊ ಅತ್ವಾ ಬಿಸ್ಕೆಟ್ಟೊ ಏನೋ ಒಂದು ಕೊಡ್ಸಿ ಅದನ್ನ ಬಿಟ್ಟು ಹೀಗೆ? ಅಲ್ಲಾ ರೀ ಸ್ವಲ್ಪ ಯೋಚನೆಮಾಡಿ ನೀವೇನಾದ್ರು ಹೋಟ್ಲಿಗೋದ್ರೆ ಕಾಫಿಗ್ಲಾಸ್ ಸರಿಯಾಗಿ ತೊಳ್ದಿಲ್ಲ ಯಾರೋ ಕುಡಿದಿರೋದ್ರಲ್ಲಿ ಕೊಡ್ತಿಯಾಅಂತೀರಾ, ತಟ್ಟೆಗೇ ಕವರ್ ಹಾಕ್ಲಿಲ್ಲಾ ಅಂದ್ರೆ ಬೈತೀರ ಯಾರ್ಯಾರೋ ತಿಂದಿರ್ತಾರೆ ಕವರ್ ಹಾಕಿ ಅಂತಾ. ಸಾಲ್ದು ಅಂತಾ ಜಾಸ್ತಿ ಜನ plasticಅತ್ವಾ paper ಗ್ಲಾಸ್ ಕೇಳ್ತಾರೆ ಕಾಫಿಗೆ ಬೇರೆ ಗ್ಲಾಸಲ್ಲಿ ಎಲ್ರು ಬಾಯಿಟ್ಟಿರ್ತಾರಂತಾ. ಹೀಗಿರುವಾಗ, ಯಾರೋ ಹಸ್ಕೊಂಡು ನಿಮ್ಮನ್ನ ಕೈಚಾಚಿಅಮ್ಮ, ಅಣ್ಣ ಅಂತಾ ಕೇಳ್ತಿದ್ರೆ ಹೇಗ್ರಿ ನೀವ್ ತಿಂದು ಮಿಕ್ಕಿದ್ದನ್ನ ಕೊಡ್ತೀರ. ಹೋಗ್ಲಿ ಹಾಗ್ ಮಾಡೋದು ಸರೀನಾ? ಕ್ಷಮ್ಸಿ ನೀವೆಲ್ಲರು ಒಳ್ಳೆವ್ರೇ ನೀವು ಹಾಗ್ ಮಾಡ್ತೀರಾ ಅಂತಲ್ಲ , ಹಾಗ್ ಮಾಡೋವ್ರಿದ್ರೆ ಮಾಡ್ಬೇಡಿ ಅಂತಾ ಅಷ್ಟೆ ” ಹಸಿವೆಂಬ ನಕ್ಷತ್ರಿಕಬೆನ್ನತ್ತಿದಾಗ ಕಣ್ಣು ಕಾಣಲ್ಲ, ಕಿವಿ ಕೇಳಲ್ಲ ಹೊಟ್ಟೆಯಷ್ಟೆ ಮಾತಾಡ್ತಿರತ್ತೆ , ಅದಕ್ಕೆ ಹಸಿವು ಅಂತ ಯಾರಾದ್ರು ಕೇಳಿದ್ರೆ ಇಲ್ಲಾ ಅಂತಾ ಬರಿಗೈಲಿಬರಬೇಡಿ ,ಏನಾದ್ರು ಕೊಟ್ಬನ್ನಿ ಪ್ಲೀಸ್..ದೇವ್ರು ಅವರ ಹಸಿವನ್ನ  ನಿಮ್ಮಿಂದಲೇ ನೀಗಿಸೋ ನಿರ್ಧಾರ ಮಾಡಿದ್ರೆ ?! ನೀವ್ ಸುಮ್ಮನೆ ವಾಪಸ್ಸಾದ್ರೆಹಸಿವಿನಿಂದಲೇ ಸಾಯೋಪರಿಸ್ಥಿತಿ ಬರತ್ತೆ;  

ಕಹಳೆ ಕಥೆ |ನನ್ನ ಸುವರ್ಣಯುಗ- ಬರೀ ನೆನಪಲ್ಲಷ್ಟೇ..|ವರುಣ್ ಹೆಚ್ ಕೆ

ಇವತ್ತಿಗೂ ಭಗವಂತ ಏನಾದ್ರೂ ಹಳೇ ಕಾಲದ ಸಿನಿಮಾದಲ್ಲಿ ತಪಸ್ಸಿಗೆ ಮೆಚ್ಚಿ ಬರೋ ಹಾಗೇ, ಬಂದ್ರೆ; ಅದಾಂಗಾಗ್ಲೀ ತಪಸ್ಸಿಗೇ ಕುಂತೇ ಬಿಡ್ತೀನಿ.. ಅಪ್ಪಿ ತಪ್ಪಿ ಏನಾದ್ರೂ ಪ್ರತ್ಯಕ್ಷ ಆಗಿ ಏನ್ ಬೇಕು ಕೇಳು ಅಂದ್ರೆ, ನಾನ್ ಮಾತ್ರ ಆ ರಕ್ಕಸ ದಡ್ಡಶಿಖಾಮಣಿಗಳ್ ತರ ಅವರಿಂದ, ಇವರಿಂದ, ಅಲ್ಲಿಂದ, ಇಲ್ಲಿಂದ ಸಾವು ಕೊಡ್ಬೇಡ ಅಂತಾನೋ ಇಲ್ಲಾ ನನ್ನಾಳು ಎತ್ತರದ ಐಶ್ವರ್ಯನೋ, ಇನ್ನೊಂದೋ ಮತ್ತಂದೋ ಕೇಳಲ್ಲ. ಕೇಳೊದೊಂದೇ, ಮೂರ್ನೇ ಕ್ಲಾಸಿಂದ ಹತ್ತನೇ ಕ್ಲಾಸ್ವರೆಗಿನ ಬಾಲ್ಯನಾ ಎರಡು ಮೂರು ಬಾರಿ ಕೊಟ್ಟು ನನ್ … More ಕಹಳೆ ಕಥೆ |ನನ್ನ ಸುವರ್ಣಯುಗ- ಬರೀ ನೆನಪಲ್ಲಷ್ಟೇ..|ವರುಣ್ ಹೆಚ್ ಕೆ

ಕಹಳೆ ಅಂಕಣ|ಚಿಣ್ಣರ ಚಕ್ಕುಲಿ |ನನ್ನ ತಾತ ನನ್ನ ಆದರ್ಶ|ಸೌಹಾರ್ದ ಸುದರ್ಶನ

ನನಗೆ ನನ್ನ ತಾತ ಎಂದರೆ ಬಹಳ ಇಷ್ಟ. ನನಗೆ ಬರವಣಿಗೆಯ ಕಲೆಯಲ್ಲಿ ಆಸಕ್ತಿ ಬರಲು ಅವರೇ ಕಾರಣ. ನಾವು ಚಿಕ್ಕವರಿದ್ದಾಗ ಅವರು ನಮ್ಮನ್ನು ಅಂಗಡಿಗೆ ಕರೆದುಕೊಂಡು ಹೋಗಿ ಚಾಕ್ಲೇಟ್ ಕೊಡೆಸುತ್ತಿದರು. ನಮ್ಮ ಮುತ್ತಜ್ಜಿಯವರು ಹೋದ ಮೇಲೆ ದಿನ ಅವರೇ ನಮ್ಮ ಶಾಲೆಯ ಬಸ್ಗಾಗಿ ನಮ್ಮನ್ನು ಆಚೆ ನಿಲ್ಲಿಸಿಕೊಳ್ಳುತ್ತಿದ್ದರು.ನನಗೆ ಯಾವುದೇ ಬಹುಮಾನ ಬರಲಿ ಕನ್ನಡದ ಬಗ್ಗೆ ನಾನು ಅವರಿಗೆ ಬಂದು, ಮೊದಲು ಹೇಳಿ ಅವರ ಕಯ್ಯಲ್ಲಿ ನನ್ನ ಪದಕವನ್ನು ಹಾಕಿಸಿಕೊಳ್ಳಲ್ಲ ಎಂದರೆ ನನಗೆ ಸಮಾಧಾನವೇ ಇಲ್ಲ. ಪ್ರತಿ ವರ್ಷ … More ಕಹಳೆ ಅಂಕಣ|ಚಿಣ್ಣರ ಚಕ್ಕುಲಿ |ನನ್ನ ತಾತ ನನ್ನ ಆದರ್ಶ|ಸೌಹಾರ್ದ ಸುದರ್ಶನ

 ಕಹಳೆ ಕವಿತೆ| ಮಗುವಾಗಿರುವೆ|ವೆಂಕಟೇಶ ಚಾಗಿ

ನಾನು ಮಗುವಾಗಿರುವೆ ಮಗನೊಂದಿಗೆ ; ಮತ್ತದೇ ಖುಷಿಗಳ ಹಂಚಿ ತಿಂದು ನೆನಪುಗಳ ಎಳೆಯಿಂದ ಕೀಟಲೆಗಳ ಕಿತ್ತು ಕೃತಕತೆಯ ನೋಟದೊಳಗೂ ಮಗುವಾಗಿರುವೆ ಮತ್ತೆ, ಮಗನೊಂದಿಗೆ…|| ಆಕಾಶದೆತ್ತರಕೆ ಜೊತೆಯಲ್ಲಿ ಜಿಗಿದು ಜರ್ರನೆ ಜಾರಿ ಸುಮ್ಮನೆ ಬಿದ್ದು; ಅಪಾರ ನಗೆಯಲ್ಲಿ ಮುಳುಗಿ, ಮತ್ತದೇ ವ್ಯರ್ಥ ಸಾಹಸ? ಅಲ್ಲ ; ಸಾಹಸದ ಸಾಕಾರದೊಳಗೆ ಮಗುವಾಗಿರುವೆ ಮತ್ತೆ ಮಗನೊಂದಿಗೆ…|| ಸುಮ್ಮನಿರುವ ಗೊಂಬೆಗಳ ಗೊಡವೆಗೆ ಸಿಲುಕಿ‌, ಕಲ್ಲು ಮಣ್ಣುಗಳಲಿ ಜೀವತುಂಬಿ ಮಾತುಗಳೇ ನಾವಾಗಿ ಹಿರಿಯ ಕಿರಿಯ ಗೋಡೆ ಕಿತ್ತು ; ಮಗನ ಮನೆಯೊಳಗೆ ಮನದೊಳಗೆ ಮಗುವಾಗಿರುವೆ … More  ಕಹಳೆ ಕವಿತೆ| ಮಗುವಾಗಿರುವೆ|ವೆಂಕಟೇಶ ಚಾಗಿ

ಕಹಳೆ ಕವಿತೆ |ನೀನಿದ್ದರೆ ಒಳ್ಳೆಯದಿತ್ತು|ಉತ್ತಮ್ ಯಾಲಿಗಾರ್

ಮಿನುಗುತ್ತಿರುವ ತಾರೆ; ಗೊಣಗುತ್ತಿರುವ ನಾನು ಸುಳಿಯುತ್ತಿರುವ ಗಾಳಿ; ಕೊಳೆಯುತ್ತಿರುವ ನಾನು ತಂಪು ನೀಡುವ ರಾತ್ರಿ; ಕುದಿಯುತ್ತಿರುವ ನಾನು ಹಾಲಂಥ ಬೆಳದಿಂಗಳು; ಉರಿಯುತ್ತಿರುವ ನಾನು ಶಾಂತ ಪ್ರಕೃತಿ, ಎದೆಯಲ್ಲಿ ವಿಕೋಪ ಭಾವನೆಗಳ ಅಸಮತೋಲನ ಎದೆಯಲದೊ ಎಂದೂ ಕೇಳಿರದ ರೋದನ ವಿಷಮ ವಿಕೃತರ ಬಗ್ಗೆ ಆಲೋಚನೆಗಳು ಎಲ್ಲ ಇದ್ದರೂ ಬರಿದಾದ ಭಾವನೆಗಳು ಅತ್ಯಾಚಾರ ಕೊಲೆ ಸುಳಿಗೆ ಸುದ್ದಿಗಳ ನಡುವೆ ಕಿತ್ತು ತಿನ್ನುವ ದ್ವೇಷದ ಸದ್ದುಗಳ ನಡುವೆ ಸುತ್ತಮುತ್ತಲ ಕತ್ತಲ ಜಾತ್ರೆಯಲ್ಲಿ ಧನಾತ್ಮಕತೆಯ ಶವಯಾತ್ರೆಯಲ್ಲಿ ನೀನಿದ್ದರೆ ಒಳ್ಳೆಯದಿತ್ತು ಗೆಳತಿ ನಿನ್ನ ನೋಡಲು … More ಕಹಳೆ ಕವಿತೆ |ನೀನಿದ್ದರೆ ಒಳ್ಳೆಯದಿತ್ತು|ಉತ್ತಮ್ ಯಾಲಿಗಾರ್

ಕಹಳೆ ಕವಿತೆ|ಜಾರು ಮಂಡೆ|ಸುರೇಶ್ ಬ್ಯಾಲಯ್ಯ& ಸೂರಜ್ ಪಿ

ಜಾರು ಮಂಡೆ-1 ಕೊಡಬೇಕಿಲ್ಲ ಕಾಸು ನಾ ಎಣ್ಣೆಗೆ ಬೇಕಿಲ್ಲ ನನಗಿನ್ನು ಆ ಬಾಚಣಿಗೆ ಬಲು ಆಭಾರಿ ನನ್ನೀ ಜಾರು ಮಂಡೆಗೆ ತಂದಿರಲು ಹಲವರ ಮೊಗದಲ್ಲಿ ಮುಗುಳು ನಗೆ.. ಬರದಿನ್ನು ಯಾವುದೇ ತೊಂದರೆ ನನಗೆ ಕೊಟ್ಟಿರಲು ಶಾಶ್ವತವಾಗಿ ಮುಡಿ ಹರಕೆಯ ದೇವರಿಗೆ ಇಟ್ಟಿರಲು ವಿರಾಮ ತಲೆ ಕೂದಲ ಕೆದರಿಕೊಳ್ಳುವ ಗೋಜಿಗೆ ನಾ ಚಿರಋಣಿ ನನ್ನೀ ಜಾರು ಮಂಡೆಗೆ… -ಸುರೇಶ್ ಬ್ಯಾಲಯ್ಯ ಜಾರು ಮಂಡೆ-2 ಮಂದಹಾಸ ಮುಡಿತ್ತಲಿ, ಮೇಲು ತುಟಿಯ ಅಂಚಿನಲ್ಲಿ, ನಿನ್ನ ನೋಡುತಗಮನ ಎಲ್ಲಿಗೋ…………. ಜಾರು ಮಂಡೆಯ ತರುಣನೇ … More ಕಹಳೆ ಕವಿತೆ|ಜಾರು ಮಂಡೆ|ಸುರೇಶ್ ಬ್ಯಾಲಯ್ಯ& ಸೂರಜ್ ಪಿ

 ಕಹಳೆ ಕವಿತೆ |ನಮ್ಮಹೊಸಪೇಟೆ|ಮುಕುಂದಾ

ನಮ್ಮಹೊಸಪೇಟೆ ಎಷ್ಟು ಚಂದಿತ್ತು ನಮ್ಮನೆ ಕಾಮಪೌಂಡು ಏನ್ ರಸವತ್ತು ನಮ್ಮ ಮಾತಿನ ಗಮ್ಮತ್ತು ಪಡಸಾಲೆತುಂಬೆಲ್ಲ ನಮ್ಮದೇ  ಕಾರಬಾರು ಅಡಕಲುಕೋಣೆಯಲ್ಲಿ ಇಲಿಗಳಾ ದರ್ಬಾರು ಕಿರ್ಕ್ ಸಾಲಿ, ಹುಣಿಚಿಕ್ಕು, ಪುಂಡಿ ಪಲ್ಯ ಸಬ್ಬಸ್ಕಿ, ಮೆಂತೆ , ರಾಜಗಿರಿ, ಸೌತೆಕಾಯಿ ಛಲೋತನಾಗಿ ತಿಂದುಂಡು ಮರಕೋತಿಯಾಟ ಧಪ್ಪೆಂದು ಬಿದ್ದನಂದ್ರೆ ಆಸ್ಪತ್ರೆಗೆ  ಸುತ್ತಾಟ ಕತ್ಲಾಗೆ ಕಳ್ಳರ ಕಾಟ ಹಿತ್ಲಾಗೆ ಹೆಗ್ಗಣ ಕಾಟ ಪಾಯಖಾನೇಗೆ ಹೋಗೋದೇ ಒಂದಪರದಾಟ ಎದ್ದಕೂಡ್ಲೇ ಕಾಲ್ವೇಗೆ ಹೋಗೋ ಗಡಿಬಿಡಿಮಂದಿ ಬಚ್ಚಲನಾಗ ಹಂಡೆಗೆ ಒಲಿಯುರಿ ಹಾಕೋಮಂದಿ ಏನಲೇ…ಇಲ್ಲದೆ ಮಾತೇಇಲ್ಲ ನಿಂಮೌ….. ಅಂದ್ರೆ ಬೇಜಾರಿಲ್ಲ … More  ಕಹಳೆ ಕವಿತೆ |ನಮ್ಮಹೊಸಪೇಟೆ|ಮುಕುಂದಾ

ಕಹಳೆ ಕವಿತೆ |ಬದಲಾವಣೆ|ಚಿನ್ಮಯ್ ಭಟ್

ಊರೆಲ್ಲ ಖಾಲಿಯಾಗುತ್ತಿದೆ; ಆಟ ಮುಗಿದ ಅಂಗಳದಂತೆ ಶಹರ ತುಂಬುತ್ತಲಿದೆ; ಇನ್ನೂ ಹೊರಡದ ಟೆಂಪೋವಿನಂತೆ ನಾನೂ ಓಡುತ್ತಿದ್ದೇನೆ ಅದೇ ನಗರಿಯಲ್ಲಿ; ಸಿಟಿಯ ಸುಖದ ಅಮಲಿನಲ್ಲಿ ಊರು-ತೋಟ-ನೆಮ್ಮದಿ ಕಾಡುತ್ತವೆ ತಡರಾತ್ರಿಯ ಕನವರಿಕೆಗಳಲ್ಲಿ ಅಜ್ಜ-ಅಜ್ಜಿ-ದೊಡ್ಡಮ್ಮ-ದೊಡ್ಡಪ್ಪ ಇನ್ನು ಶ್ರಾದ್ಧಗಳಲ್ಲಷ್ಟೇ ಸಿಗುವುದು ರಜೆ ಹಾಕಿ ಊರಿಗೆ ಹೋಗಿರಬೇಕು; ಕಾವ್ ಕಾವ್ ಎಂದು ಕರೆಯಬೇಕು ಊಟ ಮಾಡಿ ಕೈ ತೊಳೆದು ಬೆಟ್ಟ ಹತ್ತಿ; ಮೇಲ್ ಚೆಕ್ ಮಾಡಬೇಕು ಇನ್ಯಾವಗಲೋ ಬರುವೆನೆಂದು ಸಬೂಬು ಹೇಳಿ ಸ್ಲೀಪರ್ ಬಸ್ಸು ಹತ್ತಬೇಕು ಅಶುಭಕ್ಕೊಂದೇ ಕಡ್ಡಾಯ ಪ್ರಯಾಣ; ಹಬ್ಬಗಳಲೆಲ್ಲ ಹೊಟೇಲಿನ ನಿರ್ಣಯ … More ಕಹಳೆ ಕವಿತೆ |ಬದಲಾವಣೆ|ಚಿನ್ಮಯ್ ಭಟ್

ಕಹಳೆ ಕವಿತೆ|ಹೆಣ್ಣನ ಮನಸ್ಸು|ಪಾಜಕಂ (ಪಾಂಡುರಂಗೀ ವಿದ್ಯಾಧೀಶ )

ಹೇಗೆ ಹೇಳಲಿ ,ಹೆಣ್ಣಿನ ಹಿರಿಮೆ ಹೆಚ್ಚು ಹೆಚ್ಚು ಹೆಮ್ಮೆಪಡಿಸುವಂಥವಳು. ಹೇರಳ ಹೆಗ್ಗಳಿಕೆ ಪಡೆಯವವಳು.  ಹೆಜ್ಜೆನ ಸವಿಯಂತಿರುವ , ಹೇ ಹೆಣ್ಣೆ. ಕಣ್ಣಿನೊಳು ತುಂಬೀಕೊಳ್ಳುವಳು. ಕಣ್ಣಿಟ್ಟು ಕಾಯುವವಳು. ಮಣ್ಣಿನ ಮಹಿಮೆಯ ಮನದಟ್ಟು ಮಾಡುವವಳು. ಬೇಸಿಗೆಯ ತಣ್ಣಿರಂತೆ , ಮನಕಾನಂದವ ನೀಡುವವಳು. ಕಣ್ಣೀರ ಧಾರೆಯಲಿ, ಸಂತಸವ ತುಂಬಿಕೊಂಡಿರುವವಳು. ನಯ ನಾಜೂಕದಿಂದಲಿ ಕಂಗೊಳಿಸುವವಳ ನೇಸರನ ಕಾಂತಿಯ ಮೀರಿಸುವವಳ ನೆಲವ ನೋಡುತಲಿ , ನೆಲೆಯಾಗಿ ನಿಲ್ಲುವವಳ ನೂಪುರದಿ ನಲಿವ ನಾರಿಗೊಂದು ನಮನ. ಮನಸೆಂಬ ಮಜಲಿನಲಿ , ಆಸೆಗಳ ಪೇರಿಸುತಲಿ ಮಕ್ಕಳ ಮಹೋನ್ನತಿಯ ಬಯಸುವವಳ … More ಕಹಳೆ ಕವಿತೆ|ಹೆಣ್ಣನ ಮನಸ್ಸು|ಪಾಜಕಂ (ಪಾಂಡುರಂಗೀ ವಿದ್ಯಾಧೀಶ )

ಕಹಳೆ ಕವಿತೆ |ಸಿಪ್ಪೆಯೆದ್ದ ಗೋಡೆ|`ಶ್ರೀ’     ತಲಗೇರಿ

ಸಿಪ್ಪೆಯೆದ್ದ ಗೋಡೆ, ಮನೆಯ ನಾಲ್ಕು ಮೂಲೆ ಮರದ ಮೇಲೆ ಕುಳಿತ ಒಂಟಿ ಹಕ್ಕಿ ನಿನ್ನೆಯಷ್ಟೇ ಉದುರಿಹೋದ ಹಳೆಯ ಗೂಡು.. ಎಲ್ಲೋ ದಾರಿಯಲ್ಲಿ ಜೊತೆ ಕಳೆದುಕೊಂಡ ಅಂಗುಷ್ಟ ಕಿತ್ತ ಚಪ್ಪಲಿ, ಊರ ತಬ್ಬುವ ಪೊರಕೆ ಗಾಳಿಗುಂಟ ಪಾದಯಾತ್ರೆ ಕೈಗೊಂಡ ಮೋಡ ಅದರ ಹಿಂದೆ ಅಡಗಿ ಕೂರುವ ಬಿಳಿಯ ಮಡಕೆ.. ಸೋಗೆ ಗರಿಯ ಸಲಿಗೆ ಬೆಳೆಸಿ ಇಟ್ಟ ಗುಡಿಸಲು ಗಲಗಲ ಗಲ್ಲದ ಬೊಚ್ಚು ಬಾಯಿಯ ಗೊಂಬೆ.. ತಳಕೆ ಚೂರು ಅಂಟಿಕೊಂಡ ಚಹಾದ ಹೆಪ್ಪು ತಿನ್ನದೇ ಉಳಿದ ಏಕಾಂತದ ಬಿಸ್ಕತ್ತು.. ಕವಿತೆಯಾಗುತ್ತವೆ … More ಕಹಳೆ ಕವಿತೆ |ಸಿಪ್ಪೆಯೆದ್ದ ಗೋಡೆ|`ಶ್ರೀ’     ತಲಗೇರಿ

ಕಹಳೆ ಅಂಕಣ |ಪೆಡಲ್ ನುಡಿ ೨|ಚಿನ್ಮಯ್ ದೇಲಂಪಾಡಿ

ಮಂಜುಮಯ ಆಗುಂಬೆಗೊಂದು ಸೈಕಲ್ ಸವಾರಿ ಹೊರಗಡೆ ಜೋರಾದ ಮಳೆ. ಇಷ್ಟು ಹೊತ್ತು ಬೇಸಿಗೆಯ ಬಿಸಿಲಿದ್ದು ಮಧ್ಯಾನ್ಹ ಒಂದೇ ಸಮನೆ ಮಳೆ ಸುರಿಯಲಾರಂಭಿಸಿತ್ತು. ವಾತಾವರಣ ತಂಪಾಗಿತ್ತು. ನನ್ನ ಯೋಚನಾ ಲಹರಿ ಇಂತಹ ಮಳೆಯಲ್ಲೇ ಮಾಡಿದ ಸೈಕಲ್ ಸವಾರಿ ಕಡೆಗೆ ಓಡಿತು. ಎಲ್ಲರೂ ಕಾರ್ನರ್ನಲ್ಲಿ ಕಟ್ಟಿರುವ ಜೇಡರ ಬಲೆ ನೋಡಿ! ದಿನಾಂಕ: 07.08.2016 ಸ್ಥಳ: ಆಗುಂಬೆ, ಸಮಯ: ಮಧ್ಯಾಹ್ನ 12 ಘಂಟೆ”ವೇಣು ಅಣ್ಣ, ನಮ್ಮ ಸವಾರಿ ಸೂಪರ್! ವಾತಾವರಣವಂತೂ ಅದ್ಭುತ. ಏನೂ ತೊಂದರೆ ಆಗಲಿಲ್ಲ. ವಾಹ್ ವಾಹ್! ” ಎಂದು … More ಕಹಳೆ ಅಂಕಣ |ಪೆಡಲ್ ನುಡಿ ೨|ಚಿನ್ಮಯ್ ದೇಲಂಪಾಡಿ

ಕಹಳೆ ಅಂಕಣ |ಪೆಡಲ್ ನುಡಿ|ಚಿನ್ಮಯ ದೇಲಂಪಾಡಿ

ರಾಣಿಪುರಂಗೆ ಸೈಕ್ಲಿಂಗು, ಟ್ರೆಕ್ಕಿಂಗು ನನ್ನ ಸೈಕಲ್ ಸವಾರಿಯ ಕಥನಗಳಿಗೆ ನಾನಿಟ್ಟ ಹೆಸರು ‘ಪೆಡಲ್ ನುಡಿ’ ಅಂತ. ಸಣ್ಣ ಪುಟ್ಟ ಸವಾರಿಯಿಂದ ಹಿಡಿದು ಬಹುದಿನಗಳ ಸವಾರಿಯ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆಯದು. ಸೈಕಲ್ ಸವಾರಿಯ ಜೊತೆಗೆ ಅನುಭವ ಹಂಚಿಕೊಳ್ಳುವುದನ್ನು ಶುರು ಮಾಡಿ ಎರಡು ವರ್ಷಗಳು ಪೂರೈಸಿದವು. ಹಳೆಯ ಲೇಖನವೊಂದನ್ನು ಇಲ್ಲಿ ಹಂಚಿಕೊಳ್ಳುತ್ತೇನೆ. ಕಳೆದ ವರ್ಷ ಜೂನಿನಲ್ಲಿ ಸಿಕ್ಕಾಪಟ್ಟೆ ಮಳೆ ಬರುವ ಸಮಯದಲ್ಲೊಂದು ಸೈಕಲ್ ಸವಾರಿ ಕಮ್ ಚಾರಣ ಹೋಗಿದ್ದೆ. ಎಲ್ಲಿಗೆ ಅಂದಿರಾ? ಕೇರಳದಲ್ಲಿರುವ ರಾಣಿಪುರಂ ಎನ್ನುವ ಭೂಮಿಯ ಮೇಲಿನ ಸ್ವರ್ಗಕ್ಕೆ. ರಾಣಿಪುರಂ … More ಕಹಳೆ ಅಂಕಣ |ಪೆಡಲ್ ನುಡಿ|ಚಿನ್ಮಯ ದೇಲಂಪಾಡಿ

ಕಹಳೆ ಕವಿತೆ| ಪದ ಪಲ್ಲಕಿ | ಇಬ್ಬನಿ

ಮುಂಜಾವು ಗುಲಾಬಿ ಹೂವಿನ ಮೇಲೆ ಇಬ್ಬನಿ ಅದಕೆ ತಾಕಿ ಪ್ರತಿಫಲಿಸುವ ಸೂರ್ಯನ ಹೊನ್ನ ರಶ್ಮಿ ಅದೋ ಆಲಿಸು, ನಾನು ಮನದಲೇ ಗುನುಗುಟ್ಟಿದ ಕವನದ ಮಾರ್ದನಿ ಅದರಲಿ ಮಿಶ್ರಿತ ಬ್ರಮರದ ಇನಿದನಿ ಹಕ್ಕಿಗಳ ಕಲರವ ಮೇಳೈಸಿದ ಸವಿಯಾದ ಸಿಂಫನಿ ತಂಪುಗಾಳಿ ಸುಂಯ್ ಗುಟ್ಟುತ್ತ ಮೆಲ್ಲುವ ಮೆಲುದನಿ ಬೆಳಗಿನ ನಡೆಯ ತಾಳಬದ್ಧ ಹೆಜ್ಜೆದನಿ ಮರಗಳ ಎಲೆಗಳ ಸರಸರದ ಸರಣಿ ಮನವೂ ಮಿಂದು ಮಂಜಿನ ಹನಿಗಳಲಿ ಹೂವಂತೆ ಅರಳಿ ಮುಳುಗಿ ಈ ಮಾಂತ್ರಿಕ ಸಂಗೀತದಲಿ ತೇಲಿದೆ ತಂಗಾಳಿಯಲಿ ಶೇಖರಿಸಿಕೊಳಲೇ ಆ ಸೂರ್ಯನ … More ಕಹಳೆ ಕವಿತೆ| ಪದ ಪಲ್ಲಕಿ | ಇಬ್ಬನಿ